ಶ್ರೀ ದೇವಿ ಪ್ರಾರ್ಥನೆ
ಮೂರ್ಲೋಕದೊಡೆಯ ಶಿವನ ರಾಣಿ ಪಾರ್ವತಿ
ದೇವಿಯೆ ಬಾರಮ್ಮ| ಗೆಜ್ಜೆಯ ನಾದದ ಘಲು
ಘಲುರೆನ್ನುತ ಮಂಗಳ ಮಯಿನೀ ಬಾರಮ್ಮ||
ಗಜಮುಖ ಜನನಿಯೆ ಧೀರಗಂಭೀರಳೆ ಗಾಯತ್ರಿ ದೇವಿಯೆ ಬಾರಮ್ಮ| ಅoಬಾಭವಾನಿ ತುಳಜಭವಾನಿ ಗಂಗಾಭವಾನೀಯೇ ಬಾರಮ್ಮ||
ಶಂಕರ ಸ್ಥಾಪಿತೆ ಶ್ರೀ ಚಕ್ರ ಪೂಜಿತೆ ಶಾರದದೇವಿಯೆ ಬಾರಮ್ಮ| ಶೃಂಗೇರಿಯಲ್ಲಿ ನಗುನಗುತಿರುವಾ ಭಾರತಿ ದೇವಿಯೆ ಬಾರಮ್ಮ||
ಖಡ್ಗಧಾರಿಣಿ ತ್ರಿಶೂಲಪಾಣಿ ಚಾಮುಂಡೇಶ್ವರಿ ಬಾರಮ್ಮ| ರಾಜಾದಿ ರಾಜರಿಂ ಪೂಜಿಸಲ್ಪಡುವ ರಾಜರಾಜೇಶ್ವರಿ ಬಾರಮ್ಮ||
ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ ಕಾಶಿ ವಿಶಾಲಾಕ್ಷಿ ಬಾರಮ್ಮ| ಕಾಮಿತ ಫಲಗಳ ನೀಡುವಂತಹ ಕರುಣಾಸಾಗರಿ ಬಾರಮ್ಮ||
ಜಪವನಾನರಿಯೆ ತಪವನಾನರಿಯೆ ಮೂಢಳ ಕರುಣಿಸಿ ಬಾರಮ್ಮ| ಮೂಜಗವಂದಿತೆ ಮುರಹರವಲ್ಲಭೆ ಮೂಕಾಂಬಿಕೆ ತಾಯಿ ಬಾರಮ್ಮ||
ಶ್ರೀ ಸಿರಿಲಕ್ಷ್ಮಿ ವರಸಿರಿಲಕ್ಷ್ಮಿ ಪ್ರಸನ್ನ ಲಕ್ಷ್ಮಿಯೆ ಬಾರಮ್ಮ| ಶ್ರಾವಣ ಮಾಸದೊಳ್ ಪೂಜಿಸಲ್ಪಡುವ ವರಮಹಾಲಕ್ಷ್ಮಿಯೆ ಬಾರಮ್ಮ||
ಶ್ರೀ ಸಿರಿಗೌರಿ ವರಸಿರಿಗೌರಿ ಮಂಗಳ ಗೌರಿಯೆ ಬಾರಮ್ಮ| ಭಾದ್ರಪದ ಮಾಸದೊಳ್ ಪೂಜಿಸಲ್ಪಡುವ ಸ್ವರ್ಣ ಗೌರಿಯೆ ಬಾರಮ್ಮ||
ಮೀನಾಕ್ಷಿದೇವಿ ಕಾಮಾಕ್ಷಿದೇವಿ ಇಂದ್ರಾಕ್ಷಿದೇವಿಯೆ ಬಾರಮ್ಮ| ಮೈಸೂರು ಪುರದಲ್ಲಿ ನೆಲೆಯಾಗಿರುವ ಚಾಮುಂಡಿ ದೇವಿಯೆ ಬಾರಮ್ಮ||
ನವರಾತ್ರಿದೇವಿ ಮೂಲ ಸರಸ್ವತಿ ಅಷ್ಟಮಿದುರ್ಗಿಯೆ ಬಾರಮ್ಮ| ವಿಜಯದಶಮಿಯೊಳು ಬಿಜಯಂಗೈಯುವ ವಿಜಯಲಕ್ಷ್ಮಿಯೆ ಬಾರಮ್ಮ||
ಮಂಗಳರೂಪಿಣಿ ಮಂಗಳದಾಯಿನಿ ಮಂಗಳ ಆರತಿ ಎತ್ತುವೆನಮ್ಮ| ಮಲ್ಲಿಗೆ ಹೂಗಳ ಮಾಲೆಯ ಮುಡಿಸಿ ಮುದದಲಿ ಮಂಗಳ ಪಾಡುವೆನಮ್ಮ||
-x-x-x-x-x-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know