ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಶ್ರೀ ಮದ್ವ್ಯಾಸರಾಜರ ವಿರಚಿತ ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ
-ಶ್ರೀ ರಾಮನ ದೂತರಾದ ಸುಖದಾಯಕರಾದ ಕಲ್ಪವೃಕ್ಷದಂತೆ ಬೇಡಿದ ಫಲಗಳನ್ನು ಕೊಡುವ, ಪುಷ್ಪ ಹಾಗೂ ವೃತ್ತಾಕಾರವಾದ ಮಹಾಭುಜಗಳುಳ್ಳ ಹಾಗೂ ಎಲ್ಲ ಶತ್ರುಗಳನ್ನು ದೂರಮಾಡುವ ಶ್ರೀ ಹನುಮಂತ ದೇವರಿಗೆ ನಮಸ್ಕರಿಸುತ್ತೇನೆ.
ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್|ಸರ್ವದಾಭೀಷ್ಠದಾತಾರಂ ಸತಾಂವೈ ಧೃಢಮಾಹ್ವಾಯೇ II೨II
-ಅನೇಕ ತರಹದ ರತ್ನಗಳಿಂದ ಅಲಂಕೃತವಾದ ಕುಂಡಲ ಕರ್ಣಾಭರಣಗಳೇ ಮೊದಲಾದ ಆಭರಣ ಗಳಿಂದ ಅಲಂಕೃತರಾದ ಯಾವಾಗಲೂ ಸಜ್ಜನರ ಎಲ್ಲಾ ಇಚ್ಛೆಗಳನ್ನು ಪೂರೈಸುವ ಶ್ರೀ ಯಂತ್ರೋದ್ಧಾರ ಹನುಮಂತ ದೇವರನ್ನು ದೃಢವಾಗಿ ನಂಬಿ ಹೃದಯ ಮಂದಿರದಲ್ಲಿ ಕರೆತಂದು ಕೂಡ್ರಿಸುವೆನು.
ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥಗಿರೌಸದಾ|ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II
-ಸಮುದ್ರದ ಎತ್ತರವಾದ ತೆರೆಗಳಂತೆ ಎತ್ತರವಾದ ಪ್ರವಾಹವುಳ್ಳ, ತಂಪಾದ ಗಾಳಿಯಿಂದ ಹಿತವಾದ ಚಕ್ರತೀರ್ಥದ ದಕ್ಷಿಣದಲ್ಲಿರುವ ಪರ್ವತದಲ್ಲಿ ವಿರಾಜಮಾನರಾದ ಯಂತ್ರೋದ್ಧಾರಕ ಪ್ರಾಣದೇವರ ಪಾದ ಕಮಲಗಳಲ್ಲಿ ಶರಣಾಗತನಾಗಿ ಅವುಗಳನ್ನುಆಶ್ರಯಿಸುವನು.
ನಾನಾದೇಶಾಗತೈಃ ಸದ್ಧಿ: ಸೇವಮಾನಂ ನೃಪೋತ್ತಮೈಃ|ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚ ಶಕ್ತಿತಃ II೪II
-ಸಜ್ಜನರಾದ ಶ್ರೇಷ್ಠರಾಜರು ವಿಭಿನ್ನ ದೇಶಗಳಿಂದ ಇಲ್ಲಿಗೆ ಬಂದು, ತಮ್ಮ ಶಕ್ತ್ಯಾನು ಸಾರವಾಗಿ ಧೂಪ, ದೀಪ, ಪಂಚ-ಪಕ್ವಾನ್ನ ಗಳ ನೈವೇದ್ಯ ಮೊದಲಾದವುಗಳಿoದ ಸೇವೆ ಮಾಡಿದಾಗ ಅವರನ್ನು ಅನುಗ್ರಹಿಸಿದ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪಾದ ಕಮಲಗಳನ್ನು ನಾನು ಆಶ್ರಯಿಸುತ್ತೇನೆ.
ವ್ರಜಾಮಿ ಹನುಮತ್ಪಾದಂ ಹೇಮಕಾಂತಿ ಸಮಪ್ರಭಮ್|ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II
-ಬಂಗಾರದ ಕಾಂತಿಯಂತಹ ವಿಶಿಷ್ಟ ಪ್ರತಿಭೆಯಿಂದ ಕೂಡಿದ ಯತೀoದ್ರನಾದ ವ್ಯಾಸತೀರ್ಥ ನೆಂಬ ಹೆಸರುಳ್ಳ ನನ್ನಿ oದ ಅತ್ಯಂತ ಭಕ್ತಿ ಪುರಸ್ಸರವಾಗಿ ಏಕಾಗ್ರತೆಯಿಂದ ಪೂಜಿತನಾದ ಯಂತ್ರೋದ್ಧಾರಕ ಹನುಮಂತ ದೇವರ ಪಾದಕಮಲಗಳನ್ನುಆಶ್ರಯಿಸುವೆನು.
ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ|ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II
-ಆಭರಣ ಶೀಲನಾದ ತ್ರೈವರ್ಣಿಕೋತಮನು ದಿನಾಲು ಮೂರು ಸಲ ಅತ್ಯಂತ ಭಕ್ತಿಯಿಂದ ಈ ಸ್ತೋತ್ರವನ್ನು ಪಠಿಸಿದರೆ ಆರು ತಿಂಗಳೊಳಗಾಗಿ ತಾನು ಬಯಸಿದ ಎಲ್ಲಾ ಸವಲತೆಗಳನ್ನು ಪಡೆಯುತ್ತಾನೆ. ಇದು ನಿಶ್ಚಿತ.
ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥಿ ಲಭತೇ ಯಶಃ|ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಧನಮಾಪ್ನುಯಾತ್ II೭II
-ಈ ಸ್ತೋತ್ರವನ್ನು ಪಠಿಸಿದರೆ ಭಕ್ತರಿಗೆ ಮಕ್ಕಳು ಬೇಕಾಗಿದ್ದರೆ ಮಕ್ಕಳಾಗುವುವು. ಕೀರ್ತಿ ಬೇಕಾಗಿದ್ದರೆ ಕೀರ್ತಿ ಸಿಗುವುದು. ವಿದ್ಯೆಯು ಬೇಕಾಗಿದ್ದರೆ ವಿದ್ಯೆಯು ಲಭಿಸುವುದು. ಹಣವು ಬೇಕಾಗಿದ್ದರೆ ಹಣವು ಸಿಗುವುದು.
ಸರ್ವತಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ|ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧೃವಮ್II೮II
-ಈ ಸ್ತೋತ್ರವನ್ನು ಭಜಿಸಿದರೆ ಹೇಳಿದ ಫಲಗಳು ಸಿಗುವವೋ ಇಲ್ಲವೋ ಎಂಬ ಸಂಶಯಬೇಡ. ಏಕೆಂದರೆ ಈ ಫಲಗಳು ನಿಶ್ಚಿತವಾಗಿಯೂ ಸಿಗುವುವು ಎಂಬ ವಿಷಯದಲ್ಲಿ ಸ್ವ ತಃ ಶ್ರೀ ಹರಿಯೇ ಸಾಕ್ಷಿಯಾಗಿದ್ದಾನೆ. ಫಲಗಳು ಸಿಗುವವೋ ಅಥವಾ ಇಲ್ಲವೋ ಎಂದು ಯಾರಾದರೂ ಸಂಶಯ ಪಟ್ಟರೆ ಅವರು ನಿಶ್ಚಿತವಾಗಿಯೂ ನರಕವನ್ನು ಹೊಂದುವರು.
||ಶ್ರೀಕೃಷ್ಣಾರ್ಪಣಮಸ್ತು II
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know