ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ರಘುರಾಮ ರಘುರಾಮ ರಘುರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||೨||
ರಾಮ ರಾಮ ರಾಮ ರಾಮ
ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||೨||
ರಾಮ ರಾಮ ರಾಮ ರಾಮ
ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ||೨||
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ರಘುರಾಮ ರಘುರಾಮ ರಘುರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||೨||
ರಾಮ ರಾಮ ರಾಮ ರಾಮ
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ||೨||
ಗುರಿ ನೀನೆ ಗುರು ನೀನೆ ಅರಿವು ನೀ ರಾಮ||೨||
ರಘುರಾಮ ರಘುರಾಮ ರಘುರಾಮ ರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||೨||
ರಾಮ ರಾಮ ರಾಮ ರಾಮ
-------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know